ಮಂಜೇಶ್ವರ : ಮಜಿಬೈಲು ಸಮೀಪದ ಬಲ್ಲಂಗುಡೇಲು ಶ್ರೀ ಪಾಡಂಗರೆ ಭಗವತೀ ಕ್ಷೇತ್ರ ಪಟ್ಟತ್ತೂರು ಇಲ್ಲಿನ ನೂತನ ಕೊಡಿಮರ ಪ್ರತಿಷ್ಠೆ ಹಾಗೂ ಆಯುಧಗಳ ಸಾನಿಧ್ಯಕಲಶ ಪೆಬ್ರವರಿ 2 ಹಾಗೂ 3 ರಂದು ಜರಗಲಿದೆ. ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಮೂಡುಮನೆ ಶ್ರೀ ಡಾ. ರಾಮಚಂದ್ರ ಪದಕಣ್ಣಾಯ ಅವರ ನೇತೃತ್ವದಲ್ಲಿ ಪರಮಪೂಜ್ಯ ಕೊಂಡೆವೂರು ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮಿಜಿಯವರ ಶುಭಾಶೀರ್ವಾದದೊಂದಿಗೆ ಕ್ಷೇತ್ರದ ಗ್ರಾಮದ ಮುಖ್ಯಸ್ಥರು, ಆಚಾರಪಟ್ಟವರು ಹಾಗೂ ಗುರಿಕ್ಕಾರರ ಉಪಸ್ಥಿತಿಯಲ್ಲಿ ನಲವತ್ತು ಬಿಲ್ಲಿಯ ಮೂರು ಗ್ರಾಮದ ಸಮಸ್ತ ಭಕ್ತ ಮಹಾಜನರ ಸಹಭಾಗಿತ್ವದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಫೆ.2 ಕ್ಕೆ ಬೆಳಗ್ಗೆ 7 ಗಂಟೆಗೆ ಗಣಹೋಮ,10 ಗಂಟೆಗೆ ಪ್ರಾಯಶ್ಚಿತ್ತ ಹೋಮ ಬಳಿಕ ಭಂಡಾರ ಮತ್ತು ಆಯುಧಗಳ ಸಾನಿಧ್ಯ ಕಲಶಾಭಿಚೇಕ ಜರಗಲಿದೆ. ಫೆ.3ಕ್ಕೆ ಬೆಳಗ್ಗೆ 9.30ರಿಂದ 10.50ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಕೊಡಿಮರ ಪ್ರತಿಷ್ಠೆ ಹಾಗೂ ಸಾನಿಧ್ಯ ಕಲಶ ಜರಗಲಿದೆ.ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ,ಅನ್ನ ಪ್ರಸಾದ ವಿತರಣೆ ಜರಗಲಿದೆ ಎಂದು ಕ್ಷೇತ್ರ ಸಂಬಂಧಪಟ್ಟವರು ತಿಳಿಸಿದ್ದಾರೆ.


