ಶ್ರೀ ಪಾಡಾಂಗರೆ ಭಗವತಿ ಪ್ರಸನ್ನ ಆರಿಕ್ಕಾಡಿ ಕುಂಬಳೆ.
ಕಾಸರಗೋಡು ಜಿಲ್ಲೆಯ ಕುಂಬಳೆ ಗ್ರಾಮ ಪಂಚಾಯತಿನ ಆರಿಕ್ಕಾಡಿ ಎಂಬಲ್ಲಿ ದೇವಾಡಿಗ ಸಮಾಜ ಬಾಂದವರು ಆರಾದಿಸಿಕೊಂಡು
ಬರುತ್ತಿರುವ ಶ್ರೀ ಪಾಡಂಗರೆ ಭಗವತಿ ಕ್ಷೇತ್ರ ವಿರುವುದು ಇತಿಹಾಸ
ಪ್ರಸಿದ್ದವಾಗಿದೆ.ಇಲ್ಲಿ ದೇವಾಡಿಗ ಸಮಾಜದ ಆರಾಧ್ಯ ದೇವತೆಗಳಾದ ಶ್ರೀ ಪಾಡಂಗರೆ ಭಗವತಿ ,
ವಯನಾಟ್ ಕುಲವನ್ ಮತ್ತು ಪರಿವಾರ ದೇವತೆಗಳನ್ನು ಆರಾದಿಸುತ್ತಿದ್ದೇವೆ
ಚಾರಿತ್ರಿಕ ಹಿನ್ನಲೆ
ರಾಜ್ಯ ವಿಸ್ತಾರದ ಆಕಾಂಕ್ಷಿಯಾದ ಪಾಂಡ್ಯ ರಾಜನು ತನ್ನ ಪರಿವಾರ ಸಮೇತವಾಗಿ ಧಕ್ಷಿಣ ಭಾರತದತ್ತ ದಂಡೆತ್ತಿ ಬರುತಾನೆ. ರ್‍ಆಜನು ತನ್ನ ಪರಿವಾರದವರಾದ ವಾಲಗದವ, ಮಡಿವಾಲ ಕ್ಷೌರಿಕ ಮತ್ತು ಲೆಕ್ಕ ಬರಹ ಕಾಯಕ ಮಾಡುವವರನ್ನು ತನ್ನ ಸೇವೆಗಾಗಿ ಕರೆದುಕೊಂಡು ಹೋಗುವುದು ವಾಡಿಕೆ.
ಹೀಗೆ ಪರಿವಾರ ಸಮೇತ ಹೊರಟ ರಾಜನು ರಾಜ್ಯ ವಿಸ್ತಾರ ಮಾಡುತ್ತಾ ಕರ್ನಾಟಕದ ನಂದಾವರ ತನಕ ಮುಂದುವರಿದ. ನಂತರ ರಾಜ್ಯಾಡಳಿತವನ್ನು ಅಲ್ಲಿನ ತುಂಡರಸರಿಗೆ ವಹಿಸಿ ರಾಜ್ಯಭಾರ ನಡೆಸುವಂತೆ ಆಜ್ಣಾಪಿಸುತ್ತಾನೆ. ಆತನ ಪರಿವಾರದವರಾದ ವಾಲಗ ಸಮುದಾಯದವರೇ ವಾಲಗದವರು (ವಾದ್ಯದವರು) ಅಥವಾ ದೇವರನ್ನು ಆಡಿಸುವವರಾದುದರಿಂದ ದೇವಾಡಿಗರೆಂತಲೂ ಕರೆಯುತ್ತಾರೆ. ಇವರೇ ಕರ್ನಾಟಕದಲ್ಲಿ ತುಳು ಮನೆಮಾತಾಗಿರುವ ದೇವಾಡಿಗ ಸಮುದಾಯದವರಾಗಿರುತ್ತಾರೆ.
ಪಾಂಡ್ಯರಾಜನು ಕುಂಬಳೆ ಸೀಮೆಯ ಆಡಳಿತವನ್ನು ಜಯಸಿಂಹ ರಾಜನಿಗೆ ವಹಿಸಿ ಈ ಸೀಮೆಯ ದೇವಸ್ಥಾನ, ದೈವಸ್ಥಾನಗಳಲ್ಲಿ ವಾಲಗ ಸೇವೆಮಾಡಲು ಮಲಯಾಳ ಮನೆ ಮಾತಾಗಿರುವ ದೇವಾಡಿಗಸಮಾಜದವರನ್ನು ನಿಯುಕ್ತಿ ಮಾಡುತ್ತಾನೆ. ಕೇರಳ-ಕರ್ನಾಟಕ ಗಡಿಪ್ರದೇಶವಾದ ಕಾಸರಗೋಡು ಜಿಲ್ಲೆಯ ತಲಪಾಡಿಯಿಂದ ತ್ರಿಕ್ಕನ್ನಾಡು ವರೇಗೆ ಸುಮಾರು ೯೦ ಮನೆಯನ್ನೊಳಗೊಂಡ ಸಮಾಜ ಬಂದುಗಳು ಕುಂಬಳೆಯ ಆರಿಕ್ಕಾಡಿ ಎಂಬಲ್ಲಿ ಶ್ರೀ ಪಾಡಂಗರೆ ಭಗವತೀ ಮತ್ತು ಪರಿವಾರ ದೇವತೆ ಗಳಿಗೆ ಕ್ಷೇತ್ರ ನಿರ್ಮಿಸಿ ತಮ್ಮ ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಾರೆ.
ಹೆಚ್ಚಾಗಿ ಈ ಸಮಾಜ ಬಂಧುಗಳು ಕುಂಬಳೆ ಸೀಮೆಯ ಹೆಚ್ಚಿನ ದೇವಸ್ಠಾನ ಮತ್ತು ದೈವಸ್ಶಾನಗಳಲ್ಲಿ ತಮ್ಮ ಕುಲ ವ್ರತ್ತಿಯಾದ ವಾಲಗ ಸೇವೆಯನ್ನು ಮಾಡುತ್ತಾರೆ. ಶ್ರೀ ಕ್ಷೇತ್ರವುಕಾಲಕಾಲಕ್ಕೆ ನವೀಕರಣಗೋಂಡು ಭಗವತಿಯು ತನ್ನ ಸಾನಿದ್ಯವನ್ನು ಹೆಚ್ಚಿಸುತ್ತಾ ನಂಬಿದ ಸಮಾಜ ಭಂದುಗಳನ್ನು ಸಕಲ ಸಂಪದಗಳನಿತ್ತು ಸಲಹುತ್ತಿದ್ದಾಳೆ.