Paris

ಕಂಬಾರು ಕ್ಷೇತ್ರಕ್ಕೆ ಪೆರ್ಮುದೆಯಿಂದ ಹಸಿರುವಾಣಿ ಹೊರೆ ಕಾಣಿಕೆ ಮೆರವಣಿಗೆ ಶೋಭಾಯಾತ್ರೆ

     

     ಕಂಬಾರು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಅಷ್ಟಬಂಧ ಬ್ರಹ್ಮ ಕುಂಭಾಭಿಷೇಕ ಹಾಗೂ ಜಟಾಧಾರಿ ಪರಿವಾರ ಸಾನಿಧ್ಯಗಳ ಪುನಃ ಪ್ರತಿಷ್ಠೆ ಕಾರ್ಯಕ್ರಮಗಳ ಅಂಗವಾಗಿ  ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಿಂದ ಮಂಗಳವಾರ ಅಪರಾಹ್ನ ಬೃಹತ್ ಹಸಿರುವಾಣಿ ಹೊರೆ ಕಾಣಿಕೆ ಜರಗಿತು.   ಕುಡಾಲು - ಬಾಡೂರು ಎರಡೂ ಗ್ರಾಮಸ್ಥರ ಹಾಗೂ ಸಂಘ ಸಂಸ್ಥೆ ಸಮಿತಿಗಳ ನೇತೃತ್ವದಲ್ಲಿ ಸಾಗರೋಪಾದಿಯಾಗಿ ಸಾಗಿ ಬಂದ ಮೆರವಣಿಗೆಯಲ್ಲಿ ಸಿಂಗಾರಿ ಮೇಳ, ಮುತ್ತು ಕೊಡೆ, ಸಮವಸ್ತ್ರಧಾರಿತ ಮಹಿಳೆಯರು ಹಾಗೂ ವಾಹನಗಳಲ್ಲಿ ಸುವಸ್ತು ಸಾಮಾಗ್ರಿಗಳು ಸಾಗಿ ಬಂದವು. ಪೆರ್ಮುದೆ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂದಿರದಲ್ಲಿ ಪ್ರಾರ್ಥನ ಮಾಡಿ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕ್ಷೇತ್ರ ಆಡಳಿತ ಸಮಿತಿ, ಜೀರ್ಣೋದ್ಧಾರ, ಬ್ರಹ್ಮಕಲಶೋತ್ಸವ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆಗೆ ನೇತೃತ್ವವಹಿಸಿದ್ದರು.





Post a Comment

0 Comments
* Please Don't Spam Here. All the Comments are Reviewed by Admin.

Top Post Ad

Below Post Ad