ಉಪ್ಪಳ: ಬೇಕೂರು ಬಳಿಯ ಶಾಂತಿಗುಡಿ ಶ್ರೀ ಮೂಕಾಂಬಿಕ ಪರಿವಾರ ದೇವಸ್ಥಾನದಲ್ಲಿ ಮೇ 17 ,18 ,19 ರಂದು ಜರಗಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಕ್ಷೇತ್ರದ ವಠಾರದಲ್ಲಿ ಪ್ರಸಾದ್ ಶೆಟ್ಟಿ ಮಂಗಳೂರು ಇವರ ಅಧ್ಯಕ್ಷತೆಯಲ್ಲಿ ಜರಗಿತು .ಬ್ರಹ್ಮ ಕಲಶೋತ್ಸವದ ಬಗ್ಗೆ ಮತ್ತು ಕಾರ್ಯಕರ್ತರು ನಿರ್ವಹಿಸಬೇಕಾದ ಕರ್ತವ್ಯದ ಬಗ್ಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ವೀರಪ್ಪ ಅಂಬಾರ್ ಮಾಹಿತಿ ನೀಡಿ ಬ್ರಹ್ಮಕಲಶೋತ್ಸವದ ಸಮಿತಿಯನ್ನು ಘೋಷಿಸಿದರು.
ಸಭೆಯಲ್ಲಿ ಅನ್ನಪೂರ್ಣೇಶ್ವರಿ ಪ್ರಾರ್ಥನೆಯನ್ನು ಹಾಡಿದರು. ಕಾರ್ಯಧ್ಯಕ್ಷರಾದ ಮೀರ ಆಳ್ವ ಕ್ಷೇತ್ರದ ಕಾರ್ಯದ ಬಗ್ಗೆ ಮತ್ತು ಕಾರ್ಯಕ್ರಮ ದಲ್ಲಿ ಭಾಗಿಯಾದವರನ್ನು ಸ್ವಾಗತಿಸಿದರು ,ಸಭೆಯಲ್ಲಿ ಗೌರವಾಧ್ಯಕ್ಷರಾದ ದುಗ್ಗಪ್ಪ ಶೆಟ್ಟಿ ತಿಂಬರ, ,ಅಧ್ಯಕ್ಷರಾದ ರವೀಂದ್ರ ಮಡಂದೂರು, ಮಂಗಲ್ಪಾಡಿ ಗ್ರಾಮ ಪಂಚಾಯತ್ ಸದಸ್ಯರಾದ ವಿಜಯಕುಮಾರ್ ರೈ ಸುಧಾ , ರೇವತಿ ವಿಟ್ಲ ಮುಂತಾದವರು ಉಪಸ್ಥಿತರಿದರು ಬ್ರಹ್ಮಕಲಶೋತ್ಸವ ಸಮಿತಿಯ ಸಂಚಾಲಕರಾದ ಯಾದವ ಕೀರ್ತೇಶ್ವರ ಉಪ ಸಮಿತಿಗಳನ್ನ ಘೋಷಿಸಿದರು ಅಲ್ಲದೆ ಕ್ಷೇತ್ರದ ಹಿಂದೆ ನಡೆದ ಕಾರ್ಯದ ಬಗ್ಗೆ ಮತ್ತು ಕ್ಷೇತ್ರದ ಕಮಲಮ್ಮನವರ ಬಗ್ಗೆ ವಿವರಿಸಿದರು, ಬ್ರಹ್ಮಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ವಸಂತ ಮಯ್ಯ ವಂದಿಸಿದರು ಪದ್ಮಾ ಮೋಹನದಾಸ್ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ ನೂರಾರು ಮಂದಿ ಉಪಸ್ಥಿತರಿದ್ದರು

